ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕು೦ಜಾಲು ಪ್ರೌಢಶಾಲಾ ರಜತ ಸ೦ಭ್ರಮ ಮತ್ತು ಬ್ರಹ್ಮಾವರ ಪ್ರತಿಭಾ ಕಾರ೦ಜಿ ಉದ್ಘಾಟನೆ: ಡಾ|ಬಿ. ಕೆ. ಯೂಸುಫ್ ರವರಿಗೆ ಸನ್ಮಾನ

ಕು೦ಜಾಲು ಪ್ರೌಢಶಾಲಾ ರಜತ ಸ೦ಭ್ರಮ ಮತ್ತು ಬ್ರಹ್ಮಾವರ ಪ್ರತಿಭಾ ಕಾರ೦ಜಿ ಉದ್ಘಾಟನೆ: ಡಾ|ಬಿ. ಕೆ. ಯೂಸುಫ್ ರವರಿಗೆ ಸನ್ಮಾನ

Sun, 15 Nov 2009 02:58:00  Office Staff   S.O. News Service

14350.jpg

ಉಡುಪಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಕಾನ್ವೆಂಟ್ ಶಾಲೆಗಳತ್ತ ಆಕರ್ಷಿ ತರಾಗುತ್ತಿದ್ದು, ಎಲ್ಲರೂ ನಗರಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ಬರಿದಾಗಿ, ನಗರ ಬೆಳೆಯುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಶಾಲೆಗಳನ್ನು ಶಾಲಾಭಿವೃದ್ದಿ ಸಮಿತಿ, ರಕ್ಷಕರ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವು ದರ ಮೂಲಕ ಗ್ರಾಮೀಣ ಶಾಲೆಗಳನ್ನು ವಿದ್ಯಾರ್ಥಿಗಳನ್ನು ಸೆಳೆಯುವ ಕೇಂದ್ರಗಳನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

14350_12.jpg

ಅವರು ಕುಂಜಾಲು ವಿ.ಕೆ.ಆರ್. ಆಚಾರ್ಯ ಮೆಮೋರಿಯಲ್ ಪ್ರೌಢಶಾಲೆಯ ರಜತ ಮಹೋತ್ಸವ ಮತ್ತು ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಅ.೨೬ ರಂ ದು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪಠ್ಯ ಚಟುವಟಿಕೆಗಳ ಜೊತೆಗೆ ನೈತಿಕ, ಮೌಲ್ಯಯುತವಾದ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿನ ೭೦,೦೦೦ ಶಾಲೆಗಳಲ್ಲಿ ೨.೭೫ ಲ. ಶಿಕ್ಷಕರು ಕಾರ‍್ಯನಿರ್ವಹಿಸುತ್ತಿದ್ದು, ೧.೧೦ ಕೋ. ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.

14350_3.jpg

ಅತಿವೃಷ್ಟಿಯಿಂದಾಗಿ ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂ ಜಿಯನ್ನು ಡಿಸೆಂಬರ್‌ನಲ್ಲಿ ನಡೆಸಲಾಗುವುದು. ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆಯಾಗಿದೆ. ಪೋಷಕರು ಹಣಗಳಿಕೆಯ ಉದ್ದೇಶದಿಂದ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡದೆ ಅವರಲ್ಲಿರುವ ಪ್ರತಿಭೆಯನ್ನು ಗುರು ತಿಸಿ, ಪ್ರೋತ್ಸಾಹ ನೀಡಿದಲ್ಲಿ ಮಾತ್ರ ಮಕ್ಕಳು ಆಸ್ತಿ ಎನಿಸಿಕೊಳ್ಳುತ್ತಾರೆ ಎಂದರು. ಶಾಸ ಕ ಕೆ.ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

14350_5.jpg

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮುಂ ಬೈಯ ಎಸೋಸಿ ಯೇಟೆಡ್ ಕೆಮಿಕಲ್ಸ್ ಪ್ರೈ ಲಿ.ಯ ಆಡ ಳಿತ ನಿರ್ದೇಶಕ ನಾಗೇಂದ್ರ ಆಚಾರ್ಯ, ಬೆಂಗಳೂರಿನ ಕೈಗಾರಿಕೋದ್ಯಮಿ ಟಿ. ವಿಜಯ ಕುಮಾರ ರೆಡ್ಡಿ, ವಿದ್ಯಾಂಗ ಉಪನಿರ್ದೇಶಕ ಬಿ.ವಿ.ಮಹೀದಾಸ್, ಜಿ.ಪಂ. ಸದಸ್ಯ ಬಿ.ಭುಜಂಗ ಶೆಟ್ಟಿ, ತಾ. ಪಂ. ಸದ ಸ್ಯ ವಿನ್ಸೆಂಟ್ ಮಸ್ಕರೇನಸ್, ವಿ.ಕೆ.ಆಚಾರ್ಯ ಮೆಮೋರಿಯಲ್ ಪ್ರೌಢಶಾಲೆಯ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಕೆ.ವಿಠಲದಾಸ ಕಿಣಿ, ರಕ್ಷಕ ಶಿಕ್ಷಕ ಸಂಘದ ಕೆ.ಗಣೇಶ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಸುಲೋಚನಾ ಆಚಾರ್ಯ,ಭಾಸ್ಕರ ಪೈ, ಚಂದ್ರಶೇಖರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

14350_8.jpg

ರಜತಮಹೋತ್ಸವ ಕಟ್ಟಡಕ್ಕೆ ಧನ ಸಹಾಯ ಮಾಡಿದ ದುಬಾ ಮೇಘಾ ಫಾರ್ಮ್‌ನ ನಿರ್ದೇಶಕ ಡಾ|ಬಿ. ಕೆ. ಯೂಸುಫ್ ಮತ್ತು ಉದ್ಯಾವರದ ಹಲೀಮಾ ಸಾಬ್ಜು ಟ್ರಸ್ಟ್ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಅವರನ್ನು ಸಮ್ಮಾನಿಸಲಾಯಿತು.

14350_2.jpg

ಶಾಲಾ ಮುಖ್ಯೋಪಾಧ್ಯಾಯ ಬಿ. ಸಂತೋಷ್ ಕುಮಾರ್ ಶೆಟ್ಟಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಬ್ರಹ್ಮಾವರ ಬಿ‌ಇ‌ಓ ಎಸ್. ವಸಂತ ಶೆಟ್ಟಿ ಸ್ವಾಗತಿಸಿ ಸಹಶಿಕ್ಷಕ ಬಿ. ಬಾಲಗಂಗಾಧರ ಶೆಟ್ಟಿ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿ ಸಿದರು.

14350_13.jpg

ಸೌಜನ್ಯ: ಗಲ್ಫ್ ಕನ್ನಡಿಗ 


Share: